11th April 2025
ಚಡಚಣ: ಮಹಾವೀರರ ಮುಖ್ಯ ತತ್ವಗಳಲ್ಲಿ ಅಹಿಂಸೆಯೂ ಒಂದು.ಆತ್ಮವು ಪರಿಶುದ್ಧವಾಗಿದೆ ಮತ್ತು ಅನಂತವಾಗಿದೆ ಮತ್ತು ಸರಿಯಾದ ನಂಬಿಕೆ,ಜ್ಞಾನ ಮತ್ತು ನಡವಳಿಕೆಯ ಮೂಲಕ ಅದು ಮುಕ್ತಿಯನ್ನು ಪಡೆಯಬಹುದೆಂದು ಅವರು ನಂಬಿದ್ದರು ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.
ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಭಗವಾನ ಮಹಾವೀರ ಜಯಂತಿ ಉದ್ದೇಶಿಸಿ ಮಾತನಾಡಿದರು.ಮಹಾವೀರರು ಜೈನ ಧರ್ಮದ ಇಪ್ಪತ್ನಾಲ್ಕನೇ ಮತ್ತು ಕೊನೆಯ ತೀರ್ಥಂಕರರೆನ್ನುವ ಹೆಮ್ಮೆಗೆ ಪಾತ್ರರಾಗಿದ್ದಾರೆ ಎಂದರು.
ಶಿಕ್ಷಕ ಡಿ ಎಸ್ ಬಗಲಿ ಮಾತನಾಡಿ ಮಹಾವೀರರು ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯ ಕುಂದಲ ಗ್ರಾಮದಲ್ಲಿ ಜನಿಸಿದರು.ಮಹಾವೀರರು ತಮ್ಮ ಜೀವನದ ಮೂಲಕ ಅಹಿಂಸೆ,ಸತ್ಯ,ಕರುಣೆ ಮತ್ತು ಸ್ವಯಂ ಕೃಷಿಯ ಅದ್ಭುತ ತತ್ವಗಳನ್ನು ಪ್ರಸ್ತುತಪಡಿಸಿದರು.ಅವರ ಭೋದನೆಗಳು ಇಂದಿಗೂ ಪ್ರತಿಯೊಬ್ಬ ವ್ಯಕ್ತಿಗೂ ಸ್ಪೂರ್ತಿಯಾಗಿದೆ ಎಂದರು.
ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ ಅಹಿಂಸೆಯೇ ಧರ್ಮದ ಮಾರ್ಗವೆಂದವರಲ್ಲಿ ಮಹಾವೀರರೂ ಒಬ್ಬರು.ಅವರು ಅಹಿಂಸೆಯನ್ನೇ ಶ್ರೇಷ್ಠ ಧರ್ಮವೆಂದು ಬೋಧಿಸಿದ್ದಾರೆ.ಅಹಿಂಸೆಯೆAದರೆ ಕೇವಲ ದೈಹಿಕ ಹಿಂಸೆ ಅಥವಾ ನೋವಿಗೆ ಮಾತ್ರ ಸೀಮಿತವಾಗಿಲ್ಲ.ಅದು ವ್ಯಕ್ತಿಯ ಆಲೋಚನೆಗಳು,ಮಾತು ಮತ್ತು ಕಾರ್ಯಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಅಧ್ಯಕ್ಷ ಬಾಲಾಜಿ ಗಾಡಿವಡ್ಡರ,ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ಅಡುಗೆ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ